NISHTHA2.0: KA_SEC_2_9_ಚಟುವಟಿಕೆ_2_ನಿಮ್ಮ_ಅಬಿಪ್ರಾಯ_ಹಂಚಿಕೊಳ್ಳಿ

NISHTHA2.0: KA_SEC_2_9_ಚಟುವಟಿಕೆ_2_ನಿಮ್ಮ_ಅಬಿಪ್ರಾಯ_ಹಂಚಿಕೊಳ್ಳಿ: ಪ್ರೌಢಶಾಲಾ ಹಂತದಲ್ಲಿ ನಿಮ್ಮ ಬೋಧನೆ-ಕಲಿಕೆ-ಮೌಲ್ಯಮಾಪನವನ್ನು ಐ.ಸಿ.ಟಿ.ಯು ಹೇಗೆ ಬೆಂಬಲಿಸುತ್ತದೆ? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ಇಂದು ಶಿಕ್ಷಣದಲ್ಲಿ ಒಂದು ಕ್ರಾಂತಿ ಏನಾದರೂ ಆಗಿದ್ದರೆ ಅದು ಐಸಿಟಿಯಿಂದ ಎಂದೇ ಹೇಳಬೇಕಾಗುತ್ತದೆ.

ಅದರಲ್ಲೂ ನಾನು ಒಬ್ಬ ಪ್ರೌಢಶಾಲಾ ಶಿಕ್ಷಕನಾಗಿ ಹೇಳಬೇಕೆಂದರೆ, ನನ್ನ ವೃತ್ತಿ ಜೀವನದ ಒಂದು ಭಾಗವೇ ಐಸಿಟಿ ಆಗಿದೆ ಎಂದರೆ ತಪ್ಪೇನಿಲ್ಲ.

ನಾನು ನನ್ನ ವಿದ್ಯಾರ್ಥಿಗಳಿಗೆ ಏನನ್ನು , ಹೇಗೆ ಕಲಿಸಬೇಕೆಂದು ಯೋಚಿಸುವೆನೋ ಹಾಗೆಯೇ ಐಸಿಟಿ ಸಾಧನ ಬಳಸಿ, ವಿಷಯ ವಸ್ತುವನ್ನು ಸೃಜಿಸಿ, ಸಂಗ್ರಹಿಸಿ, ಬೇಕೆಂದಾಗ ಬೇಕಾದ ರೀತಿಯಲ್ಲಿ ತಿದ್ದುಪಡಿ ಮಾಡಿ ನನ್ನ ವಿದ್ಯಾರ್ಥಿಗಳಿಗೆ ಹಂಚಲು ಹಾಗೂ ಅದರ ಮುಖೇನ ಮೌಲ್ಯ ಮಾಪನ ಮಾಡಲು ಈ ಐಸಿಟಿ ತುಂಬಾ ಸಹಕಾರಿ ಆಗಿದೆ ಎಂದು ಹೇಳಬಯಸುವೆ.

Comments