ಸ್ವ ರಚಿತ ಮಕ್ಕಳ ಕವಿತೆ

ವಿದ್ಯಾರ್ಥಿಯ ಪ್ರಾರ್ಥನೆ


ತಾಯಿ ಶಾರದೆ ನಮಿಪೆ ನಿನಗೆ

ಸಾವಿರ ಕೋಟಿ ವಂದನೆ //ಪ//


ಸತ್ಯ ನೀತಿ ಧರ್ಮಗಳನು ಪರಿಪಾಠವಾಗಿಸಮ್ಮ

ಸಕಲ ವಿದ್ಯೆಗೆ ಆದಿಶಕ್ತಿ, ಮಾತೆ ನೀನು ಒಲಿಯಮ್ಮ //೧//


ನಿನ್ನ ಪಾದ ಕಮಲಕೆಂದು ನನ್ನ ಶಿರವು ಧಾರಣ

ಅಮ್ಮ ನಿನ್ನ ಅಭಯ ಹಸ್ತ ನೀಡಲೆನಗೆ ಹೂ ಬನ //೨//


ಲಕ್ಷ್ಮಿ ಮಾತೆ ನಿಧಿಯ ಧಾತೆ ನೀನು ಎನಗೆ ಚಿಕ್ಕಮಾ

ಎನ್ನ ತಾಯಿ ವಿದ್ಯೆಗೊಲಿದು ನನ್ನ ಹರಿಸಿ ಕಾಪಾಡಮಾ //೩//


ನಿಮ್ಮಲಿ ಭೇದ ಇಲ್ಲದ ಕಂಡು ಎಲ್ಲೋ ನನಗೆ ಸಂತಸ

ಹಿರಿಯ ಸಹೋದರಿಯರಿಬ್ಬರೂ ಇಟ್ಟಿರಿ ಕಿರಿಯ ಗಣಪಗೆ ಹೊಂಗಳಸ //೪//


ಪಾಪ ವಿನಾಶಕ ವಿದ್ಯೆ ಪ್ರದಾಯಕ ತಾಯಿ ತಮ್ಮನೇ ಮಾವಯ್ಯ

ತಪ್ಪು ದಾರಿ ತುಳಿಯದಂತೆ ಎಂದೂ ಎನ್ನನು ಹರಸಯ್ಯ //೫//


ರಚನೆ: 

ನಾಗೇಂದ್ರ ಬಿ. ಮೇವುಂಡಿ. 

ಮುಖ್ಯ ಗುರುಗಳು,

ಸರಕಾರಿ ಪ್ರೌಢಶಾಲೆ, ಗದ್ದಿಕೇರಿ.

ಮೊ. 9972780228

Comments